Thursday, January 17, 2008

ಮಾದಪ್ಪನ ಯಾತ್ರೆ

http://enguru।blogspot.com/2008/01/blog-post_17.html
ಅಯ್ಯಪ್ಪ ಸ್ವಾಮಿಯ ಶಬರಿಮಲೆ ಯಾತ್ರೆ ಬದ್ಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಳ್ಳಿ ತಾಲೂಕಿನ ಬೂದಿಗೆರೆ ಹಳ್ಳಿಗರು ಮಾದಪ್ಪನ ಯಾತ್ರೆ ನಡುಸ್ತಾ ಇರೋ ಸುದ್ದಿ ಇವತ್ತಿನ ವಿ।ಕ.ದಲ್ಲಿ ಪ್ರಕಟವಾಗಿದೆ. ಇದು ಅಂಥಾ ದೊಡ್ಡ ಬೆಳವಣಿಗೆಯೇನಲ್ಲ ಅನ್ನಿಸಬಹುದು. ಆದ್ರೆ ನಿಜಕ್ಕೂ ನೋಡುದ್ರೆ ಧರ್ಮದ ಹೆಸರಲ್ಲಿ ಕನ್ನಡಿಗರ ಮೇಲೆ ಆಗ್ತಿರೋ ಭಾಷಾ/ಸಾಂಸ್ಕೃತಿಕ ದಾಳಿಗಳ ಈ ಯುಗದಲ್ಲಿ ಈ ಘಟನೆ ಸಕ್ಕತ್ ಸಂತೋಷ ನೀಡೋಂಥದ್ದು ಗುರು. ಈ ಹಲ್ಲೆಗಳು ಎಂಥವು, ಇದರ ಹೊರಮುಖ ಎಂಥದ್ದು, ಒಳಮುಖ ಎಂಥದ್ದು ಅನ್ನೋದರ ಬಗ್ಗೆ ಒಸಿ ನೋಡ್ಮ.